ವಿಕಾಸ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪುನರ್ಮನನ ಶಿಬಿರ || Vikaas College

ಮಂಗಳೂರು :ದಿನಾಂಕ 12-6-22ರಂದು ನಗರದ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಕಾಲೇಜಿನ ಪುನರ್ಮನನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳು ಹೊಸ ವಾತಾವರಣಕ್ಕೆ ಸ್ವಾಗತ ಪಡೆದರು.
ಸಮಾರಂಭದ ಮುಖ್ಯ ಅಥಿತಿಗಳಾಗಿ ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವಾ ಆಗಮಿಸಿ ಮಾತನಾಡಿ ಶಾಲಾ ಶಿಕ್ಷಣಕ್ಕೂ ಪಿಯುಸಿ ಶಿಕ್ಷಣಕ್ಕೂ ಹೆಚ್ಚಿನ ವ್ಯತ್ಯಾಸವಿದೆ. ಪಿಯುಸಿ ಹಂತದ ವಿದ್ಯಾರ್ಥಿಗಳು ಹೆಚ್ಚು ಸ್ವತಂತ್ರ ಮತ್ತು ಜವಾಬ್ದಾರಿಯುತರಾಗಿರಬೇಕು ಪಿಯು ಬೋರ್ಡ್ ತರಗತಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೊಂದಿಗೆ ಸಂ ಯೋಜಿಸಲಾಗಿರುವ ಕಾಲೇಜನ್ನು ಆಯ್ಕೆ ಮಾಡಿಕೊಂಡದ್ದಕ್ಕಾಗಿ ವಿದ್ಯಾರ್ಥಿಗಳಿಗೆ ಮೆಚ್ಚುಗೆ ಸೂಚಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಅಲೆನ್ ಕೆರಿಯರ್ ಸಂಸ್ಥೆಯ ವಲಯ ಮುಖ್ಯಸ್ಥ ಶ್ರೀಯುತ ಮಹೇಶ್ ಯಾದವ್ ಅವರು ಜೆಇಇ ಮತ್ತು ನೀಟ್ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಮುಂದಿನ ವೃತ್ತಿಜೀವನದ ಬಗ್ಗೆ ವಿವರಿಸಿದರು. ತಮ್ಮ ಗುರಿಗಳನ್ನು ಸಾಧಿಸಲು ತ್ಯಾಗ ಅನಿವಾರ್ಯ. ತ್ಯಾಗ ಈ ಹಂತದಿಂದಲೇ ಪ್ರಾರಂಭವಾಗಬೇಕು ಎಂದರು.

ವಿಕಾಸ್ ಎಜುಕೇಷನ್ ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀಯುತ ಕೃಷ್ಣ ಜೆ ಪಾಲೆಮಾರ್ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಾಮಾಜಿಕ ನಡವಳಿಕೆಯನ್ನು ಹೊಂದಿರುವ ಜವಾಬ್ದಾರಿಯುತ ನಾಗರಿಕರಾಗಲು ಪ್ರೇ ರೇಪಿಸಿದರು. ಹದಿಹರೆಯದ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ಹಲವಾರು ತಪ್ಪುಗಳನ್ನು ಮಾಡಬಹುದು. ಆದರೆ ವಿಕಾಸ್ ನಲ್ಲಿ ಅವರು ಜೀವನದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವತ್ತ ಅವರನ್ನು ರೂಪಿಸುತ್ತೇವೆ ಎಂದರು.

 

ವೇದಿಕೆಯಲ್ಲಿ ವಿಕಾಸ್ ಎ ಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮತ್ತು ಖಜಾಂಚಿ ಶ್ರೀ ಜೆ.ಕೊರಗಪ್ಪ, ಟ್ರಸ್ಟಿ ಶ್ರೀ. ಜೆಕೆ ರಾವ್ ಮತ್ತು ಶ್ರೀ. ಸೂರಜ್ ಕುಮಾರ್ ಕಲ್ಯಾ, ವಿಕಾಸ್ ಸಮೂಹ ಸಂಸ್ಥೆಗಳ ಸಿಇಒಶ್ರೀಯುತ ಜೆ. ಪಾರ್ಥಸಾರಥಿ ಪಾಲೆಮಾರ್, ಮಂಗಳೂರಿನ ಅಲೆನ್ ಕರಿಯರ್ ಸಂಸ್ಥೆಯ ಕೇಂದ್ರ ಮುಖ್ಯಸ್ಥ ವಿಪಿನ್ ನಾರಾಯಣನ್ ಉಪಸ್ಥಿತರಿದ್ದರು.
ವಿಕಾಸ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮೋಹನಾ ಆರ್ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಂಯೋಜಕಿ ಹಾಗೂ ವಿಕಾಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಐಶ್ವರ್ಯ ಕೆ. ವಂದಿಸಿದರು. ಶ್ರೀ ಹನೂಬ್ ಕೆ ಸಿ ಮತ್ತು ಕುಮಾರಿ ಅಕ್ಷತಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

Social Circle